ಗಾಣಿಗ ಸಮಾಜ

ಪುಣ್ಯಭೂಮಿ ಭಾರತವು ಅನೇಕ ಧರ್ಮಗಳ ಮತ ಪಂಥಗಳ ವಿವಿಧ ರೀತಿಯ ಆಚರಣೆಗಳೊಂದಿಗೆ ವಿವಿಧೆತೆ ಯಲ್ಲಿ ಏಕತೆಯನ್ನು ಕಾಣುವಂತಹ ಮಾತೃಭೂಮಿ ಯಾಗಿದೆ. ಇಂತಹ ಅನೇಕ ಜಾತಿ ಪಂಥಗಳಲ್ಲಿ ಗಾಣಿಗ ಸಮಾಜವು ಒಂದು.
ಮೂಲತ: ತೈಲೋತ್ಪಾದನೆಯ ಉದ್ಯೌಗವನ್ನು ಅವಲಂಬಿಸಿಕೊಂಡು ಬಂದಿರುವ ಗಾಣಿಗ ಸಮಾಜದವರನ್ನು ಗಾಣಿಗ, ತೇಲಿ, ತೆಲ್ಲಿಗ ಮೊದಲಾದ ಹೆಸರಿನಿಂದ ಕರೆಯಲಾಗುತ್ತಿದ್ದು ಇವರಲ್ಲಿ -ಕರಿಯ ಗಾಣಿಗ, ಬಿಳಿಗಾಣಿಗ, ಸಜ್ಜನ ಗಾಣಿಗ, ಜ್ಯೌತಿ ಗಾಣಿಗ, ಪಂಚಮಗಾಣಿಗ, ಬೈಲಗಾಣಿಗ ಮುಂತಾದ ಒಳಪಂಗಡ ಗಳಿವೆ. ಗಾಣಿಗರು ಇಷ್ಟಲಿಂಗ ಧಾರಿಗಳಾಗಿದ್ದು ಲಿಂಗಾಯತ ಗಾಣಿಗ ರೆಂದು ಕರೆಯಲ್ಪಡುತ್ತಾರೆ. ಬಸವಧರ್ಮಾನುಯಾಯಿಯಾಗಿರುವ ಇವರು ಶರಣತತ್ವ ಪಾಲಕರಾಗಿದ್ದಾರೆ. ಮಹಾರಾಷ್ಟ್ತ್ರದಲ್ಲಿರುವವರನ್ನು ತೇಲಿ ಎಂದೂ ಆಂಧ್ರ ಪ್ರದೇಶದಲ್ಲಿ ಇರುವವರನ್ನು ತೆಲ್ಲಿಗರೆಂದೂ ಕರೆಯಲಾಗುತ್ತಿದ್ದು ಇವರಲ್ಲೆರೂ ವೀರಶೈವ ಸಂಪ್ರದಾಯಸ್ಥರಾಗಿದ್ದಾರೆ.
ಶೇಂಗಾ ಕುಸಬಿ, ಸಾಸಿವೆ, ಎಳ್ಳು, ಖೊಬ್ರಿ ಇವುಗಳಿಂದ ನಿರ್ಮಿತವಾದ ಎಣ್ಣೆ ಅಡುಗೆ ಮಾಧ್ಯಮ. ಅಂದ ಮೇಲೆ ಪ್ರತಿ ಗ್ರಾಮದಲ್ಲಿಯೂ ಈ ಜನತೆ ಇದ್ದೇ ಇದೆ. ಹೀಗಾಗಿಯೇ ಗಾಣಿಗರಿಲ್ಲದ ಗ್ರಾಮವೇ ಇಲ್ಲ ಎಂಬುದು ಮತ್ತು ಶಿಗಾಣಿಗರ ಕೂಡ ಜಗಳ ಮಾಡಿದರ ಒಣ ರೊಟ್ಟಿ ತಿನ್ನಬೇಕಾಗುತ್ತದೆಷಿ ಎಂಬ ಗಾದೆ ಪ್ರಚಲಿತದಲ್ಲಿದೆ.
ಐತಿಹಾಸಿಕ ಆಧಾರ : ಕ್ಷತ್ರೀಯ ರಾಜ ವಿಕ್ರಮಾದಿತ್ಯನಿಗೆ ಶನಿ ಸಕಲ ರೀತಿಯಿಂದ ಕಾಡಿದ ಕೊನೆಗೆ ರಾಜ ಶನಿದೇವನಿಗೆ ಶರಣು ಹೋದ. ಅದರ ಪರಿಣಾಮ ಪ್ರತ್ಯಕ್ಷನಾದ ಶನಿದೇವನು ಏನಾದರೂ ವರ ಬೇಡಿಕೊ ಎಂದು ರಾಜನನ್ನು ಕೇಳಿದಾಗ ಹೇ ದೇವಾ ಗಾಣಿಗರು ನನ್ನನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ ನನಗೆ ಆಸರೆ ನೀಡಿದ್ದಾರೆ. ಕಾರಣ ನೀನು ಅವರಿಗೆ ಕಾಡುವುದಿಲ್ಲವೆಂಬ ವರವನ್ನು ಕೊಡು ಎಂದು ಬೇಡಿಕೊಂಡಿದ್ದನಂತೆ. ಆದ್ದರಿಂದಲೇ ಗಾಣಿಗರಿಗೆ ಶನಿ ಕಾಟವಿಲ್ಲ
ಬಾದಾಮಿ ಚಾಲುಕ್ಯರ ಸಾಮಂತರು ಎನಿಸಿಕೊಂಡ ವಿನಯಾದಿತ್ಯ ನಿತ್ಯ ಐದನೂರು ಆನೆಗಳನ್ನು ಮೇಯಿಸುತ್ತಿದ್ದನೆಂದು ಪಂಪ ಕವಿ ತನ್ನ ಕೃತಿಯಲ್ಲಿ ಬರೆದಿದ್ದಾನೆ. ಆದ್ದರಿಂದಲೇ ಕರಿ ಎಂದರೆ ಆನೆ, ಸಂರಕ್ಷಿಸುತ್ತಿರುವುದರಿಂದ ಕರಿ ಕುಲ ಎಂದು ಹೇಳಲಾಗುತ್ತಿದೆ. ಕಲ್ಯಾಣ ಚಾಲುಕ್ಯ ಅರಸರಲ್ಲಿ ಇಮ್ಮಡಿ ತೈಲಪ್ಪನ ಮಗನಾದ ಸತ್ಯಾಶ್ರಯನನ್ನು ಖ್ಯಾತ ಕವಿ ರನ್ನ ತನ್ನ ಗದಾಯುದ್ಧದಲ್ಲಿ ಅಮ್ಮನ ಗಂಧವಾರಣ ಎಂದು ಅಂದರೆ ಆನೆಯ ಬಲದವನೆಂದು ಬಣ್ಣಿಸಿದ್ದಾನೆ. ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ತ್ರ ಪ್ರಾಂತ್ಯಗಳಲ್ಲಿ ವಾಸವಾಗಿರುವ ಗಾಣಿಗ ಸಮಾಜದವರೆಲ್ಲ ಮೂಲ ಸ್ಥಾನದಲ್ಲಿದ್ದು ಗೌರವಿಸಲ್ಪಡುತ್ತಿದ್ದಾರೆ. ಕರಿಯ ಕುಲದ ಗಾಣಿಗರ ಸಮಾಜದಲ್ಲಿ ನ್ಯಾಯಗಳ ತೀರ್ಪು ನೀಡುವುದು. ದಂಡಿಸುವುದು. ಶುದ್ದೀಕರಿಸು ವುದು ಮುಂತಾದ ಧರ್ಮಾಧಿಕಾರವನ್ನು ಹೊಂದಿರುತ್ತಾರೆ. ಈ ಸಮಾಜವು ಹಸಿರು ದಿವಟಿಗೆ ಹಸಿರು ನಿಶಾನೆ ಹಿಡಿದು ವಿಶೇಷ ಅಧಿಕಾರವನ್ನು ಹೊಂದಿರುತ್ತದೆ.
ಕಾಶ್ಮೀರದಿಂದ ಕನ್ಯಾ ಕುಮಾರಿಯವರಿಗೆ ಸೌರಾಷ್ಟ್ತ್ರದಿಂದ ಆಸ್ಸಾಮದವರಿಗೆ ಎಲ್ಲ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಹೆಸರಿನ ಗಾಣಿಗರಿದ್ದಾರೆ. ಭಾರತದಲ್ಲಿ ಗಾಣಿಗರ ಸಂಖ್ಯೆ ಸುಮಾರು 8 ಕೋಟಿ ಈ ಸಮಾಜದಲ್ಲಿ ಅನೇಕ ವಿದ್ವಾಂಸರು, ಮಹಾಪುರುಷರು, ಬಸವಾಧಿ ಪ್ರಮತರಲ್ಲಿ ಒಬ್ಬನಾದ ಗಾಣಿಗ ಕನ್ನಪ್ಪ, ಇತ್ತೀಚಿನ ದಿನಗಳಲ್ಲಿ ನಡೆದಾಡುವ ದೇವರೆಂದು ಎಣಿಸಿಕೊಳ್ಳುವ ಸಿದ್ದೇಶ್ವರ ಶ್ರೀಗಳು ಹಾಗೂ ಅಗ್ರಮಾನ್ಯ ಉದ್ಯಮಪತಿಗಳು ರಾಜಕೀಯ ದುರೀಣರನ್ನು ಒಳಗೊಂಡಿದೆ.
ಆದಿ ಕವಿ ಸರ್ವಜ್ಞನ ವಚನದಲ್ಲಿ ಗಾಣಿಗರಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ಎಳ್ಳು ಗಾಣಿಗಬಲ್ಲ ….ಮತ್ತು ಊರಿಗೊಬ್ಬ ಗಾಣಿಗ ಶ್ರೇಷ್ಠ… ಗಾಣಿಗರಿಲ್ಲದ ಊರಲ್ಲ….ಮುಂತಾದವುಗಳು…
ಗಾಣಿಗರು ಕಾಯಕನಿಷ್ಠೆಗೆ ಹೆಸರಾದವರು. ಸಾಧನವೇ ಸಿದ್ದಿ ಎಂದು ದುಡಿಯುವವರು. ದಾನ ಧರ್ಮಕ್ಕೆ ಹೆಸರಾದವರು. ದು:ಖ ದುಮ್ಮಾನಕ್ಕೆ ಅಂಜದವರು. ತಮ್ಮತನವನ್ನು ಧಾರೆ ಎರೆವವರು. ಸುಜನರೆಂದು ಖ್ಯಾತಿಗೊಂಡವರು ಬಣ್ಣದ ಬದುಕಿಗೆ ಆಶೆ ಪಡೆದವರು. ಗಾಣದ ಸುತ್ತೆಲ್ಲ ಪ್ರೇಮ ಹರಡುವವರು. ಗಾಣದೇವತೆಗೆ ನಿತ್ಯ ನಮಿಸುವವರು ಎಂಬಿತ್ಯಾದಿ ಗೀತೆ ಗಳು,ವಚನಗಳು ಪ್ರಚಲಿತದಲ್ಲಿವೆ.

No comments:

Post a Comment